ನಾನು ಸಿರಸಿಯ ಸಮೀಪ ಇರೋ ಕುಳುವೆ ಎಂಬ ಒಂದು ಚಿಕ್ಕ ಹಳ್ಳಿಯವನು. ಮಲೆನಾಡಲ್ಲಿ ಹುಟ್ಟಿ , ಬೆಳೆದು, ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದೆ. ಕಳೆದ ಕೆಲ ದಿನಗಳಿಂದ ವಿದೇಶಿ ಬ್ಯಾಂಕ್ ನಲ್ಲಿ Financial Analyst ಆಗಿ ಕೆಲಸ ಮಾಡುತ್ತಿದ್ದೇನೆ. ಟೈಮ್ ಪಾಸು ಆಗೋಲ್ಲ ಅಂತ ಬರೆಯೋಕೆ ಶುರು ಮಾಡಿದ್ದು , ಈಗ ಅದೇನೋ ಒಂದು ತರ ಹವ್ಯಾಸವಾಗಿ ಬೆಳೆದು ಬಿಟ್ಟಿದೆ . ನಮ್ಮೆಲ್ಲರ ಮನಸ್ಸಿನಲ್ಲಿ ಮೂಡೋ ನಾನಾ ಬಗೆಯ ಕಲ್ಪನೆಗಳನ್ನು ಕವನದ ಮೂಲಕ ವ್ಯಕ್ತ ಪಡಿಸೋ ಒಂದು ಸಣ್ಣ ಪ್ರಯತ್ನ ಇದು ಅಷ್ಟೇ.